Tuesday, June 16, 2009

ಹೆಬ್ಬಾಗಿಲು...




ದಾರಿಯಿದೆ.. ಸಾಗಬೇಕಿದೆ ಬಲು ದೂರ...

ತಲೆಯ ಮೇಲಿದೆ ಒಂದಷ್ಟು ಹೊರೆ...

ಬದುಕಲ್ಲೂ ಹಾಗಲ್ವೇ....

ಆಸೆಗಳ... ಕನಸುಗಳ ಹೊರೆಯನ್ನು ಹೊತ್ತು...

ಅವಕಾಶಗಳ ಹೆಬ್ಬಾಗಿಲ ಮುಂದೆ ದಾಟಿ ಸಾಗಿದಾಗ....

ಅಲ್ಲೊಂದು ಲೋಕ ಶುರುವಾಗುತ್ತದೆ.... ಮನಸ್ಸೂ ನಿರಾಳವಾಗುತ್ತದೆ...

ಆದರೆ ಗುರಿ ತಲುಪಲು ಬಾಕಿಯಿದೆ ಇನ್ನೂ ದೂರ...

Sunday, June 14, 2009

ಮರಕ್ಕೆ ಮರವೇ ಆಧಾರ....



ಅದು ಹೊರಟಿತ್ತು ಎತ್ತಲೋ ದೂರ...

ದಾರಿ ಮಧ್ಯೆ ಸುಸ್ತಾಗಿ ಮಲಗಿತ್ತು ಅಡ್ಡ....

ಮತ್ತೆ ಮೇಲದ್ದಾಗ ಇಳಿಯಲಾಗದೆ ಒದ್ದಾಡಿತು...



ಆಗ ನೆರವಾದದ್ದು ಮರ....

ಮರಕ್ಕೆ ಮರವೇ ಆಸರೆಯಾಯಿತು ಇಲ್ಲಿ....

ಬದುಕು ಕೂಡಾ ಹಾಗಲ್ಲವೇ ......

ಸೋತು ನಿಂತಾಗ ನೆರವಿಗೆ ಬೇರಾರು ಬಾರಲಾರರು...

ಅದುವರೆಗೆ ಬದುಕನ್ನು ಸಾಗಿಸುತ್ತಿದ್ದ ಎಲ್ಲಾ ನೋವು ನಲಿವುಗಳು ಕೂಡಾ

ಅಶಕ್ತವಾದಾಗ ನೆರವಿಗೆ ಬರುವುದು ಯಾವುದು...??

Thursday, April 16, 2009

ಎರಡು ಚಿತ್ರ..



ಬದುಕೆಂಬ ಸಾಗರದಲ್ಲಿ ...

ನೋವು..ದು:ಖ..ಅವಮಾನ.. ಕಷ್ಟ..ಸುಖವೆಂಬ... ತೆರೆಗಳು ಅಪ್ಪಳಿಸುತ್ತಲೇ ಇರುತ್ತವೆ..

ಕೆಲವೊಂದು ಚಿಕ್ಕದು.. ಇನ್ನೊಂದು ದೊಡ್ಡದು..

ಅದೇ ಕಡಲು ಮತ್ತು ಒಡಲಿನ ನಂಟು...




ಹಾಗಾಗಿ ನಾಳೆಯ ಕನಸಿಗೆ ಇಂದೇ ತಯಾರಿ..

ಎನ್ನ "ದಾರಿ" ಎನಗೆ... ನಿನ್ನ "ದಾರಿ" ನಿನಗೆ...

Monday, March 23, 2009

ಭಸ್ಮ.... !!!







ಹೊತ್ತಿತೋ ಹೊತ್ತಿತು....!! ಹುಲ್ಲಿನ ಲಾರಿ......

ಬೆಂಕಿ ಬಿದ್ದಿದೆ ಬನ್ನಿ ....ಲಾರಿಗೆ !! ಓ ಅಣ್ಣಂದಿರೇ.... ಬೇಗ ಬನ್ನಿ...!!

ಇವೆರಡೂ ಕವಿ ವಾಣಿಯ ಸಾಲುಗಳು... ಈಗ ಸಾಂದರ್ಭಿಕ ಸಾಲು...!!


Saturday, March 21, 2009

ಪ್ರತಿ - ಬಿಂಬ



ಇದು ಬಿಂಬ ಪ್ರತಿಬಿಂಬ...

ನಮ್ಮದೂ ಹಾಗೆಯೇ...

ಅತರಂಗದ ನೋವುಗಳಿಗೆ...ಸಂತಸಗಳಿಗೆ... ಗೆಲುವು-ಸೋಲುಗಳಿಗೆ...

ಒಂದು "ಪ್ರತಿ-ಬಿಂಬ" ಬೇಡವೇ...

ಅದಕ್ಕೂ ಒಂದು ಸೇತುವೆ ಬೇಡವೇ....

ಆ "ಸೇತು"ವೇ ಶಾಶ್ವತವಾಗಿರಬೇಕಲ್ಲವೇ...

ಆ ದಿನ ಬರಲಿ....

Monday, February 23, 2009

ಬೆಂಕಿ . . ಇದು ಬೆಂಕಿ. .




ಇದು ಬೆಂಕಿ ...

ಭೂತದ ಬೆಂಕಿ...

ಧಗ ಧಗಿಸುವ ಬೆಂಕಿ..

ಭೂತಾರಾಧನೆಯ ಬೆಂಕಿ ಇದು... ಭಕ್ತಿಯ ಬೆಂಕಿ...





Thursday, January 29, 2009

ಕೋಳಿ ಜಗಳ....



ಇಲ್ಲಿ ನಡೆಯುತ್ತಿದೆ ಕೋಳಿ ಜಗಳ..

ಈಗ ಅಲ್ಲಿ ಇಲ್ಲಿ ನಡೆಯುತ್ತಲ್ಲಾ ಹಾಗೆ




ಆದರೆ ಇಲ್ಲಿ ನಡೆಯುವುದು ಮಜಾ ಮಾಡಲು.. ಜೂಜು ಮಾಡಲು..

ಆದರೆ ಅಲ್ಲಿ ನಡೆಯುವುದು .. ಸಜೆ ಮಾಡಲು.. ಗಲಿಬಿಲಿ ಮಾಡಿಸಲು..





ಅದಕ್ಕೇ ಹಿರಿಯರು ಹೇಳಿದ್ದು ಅದು ಕೋಳಿ ಜಗಳ....

ಕಾರಣವಿಲ್ಲದೆ ನಡೆಯುವ ಜಗಳ... ಅದೂ ಗೆಳೆಯರ .. ಒಂದೇ ಕುಲದ ನಡುವೆo

Tuesday, January 13, 2009

ಬೆಳಗಿನ ಬೆಳ್ಳಿಕಿರಣ....




ಬೆಳಕು ಹರಿಯುವ ಹೊತ್ತು......

ಹಕ್ಕಿ ಹಾರುವ ಸಮಯ. .. .

ಕೋಗಿಲೆಯ ಸವಿಗಾನ ಕೇಳುವ ಕ್ಷಣ...

ಬದುಕೆಂಬ ರಥದ ಚಕ್ರ ಉರುಳುವ ಹೊತ್ತು....

....ನೇಸರನ ಈ ಬೆಳಕು,ಕಾನನದೊಳಗಿನ ಆ ಇಂಚರವು

.. ನೀಡುವುದು ಮನಕೆ ಮುದ....





Saturday, December 6, 2008

ಇಳಿ ಹೊತ್ತಲ್ಲಿ ಹುಡು ಗಾಟ




ಬದುಕೆಂಬ ಪಯಣದ ಆರಂಭದಲ್ಲಿ...

ಅಲ್ಲೆಲ್ಲಾ ಹುಡುಕಾಟ....

ಆಗ ಅದೆಲ್ಲಲೂ ಮರಳಿನ ಆಟ...

Saturday, November 22, 2008

ಸುಂದರ ನೋಟದ ಹಿಂದೆ...



ಸುಂದರ ನೋಟವಿದು... ಕಣ್ತುಂಬ ನೋಡಿ ಮರುಳಾದೆ...

ದಿಗಂತದತ್ತ ನೆಟ್ಟ ದೃಷ್ಠಿಯಲ್ಲಿ ಸೃಷ್ಠಿಯಾಯಿತು ಕನಸುಗಳ ಕೂಸುಗಳು...




ಆ ಕನಸುಗಳಿಗೆಲ್ಲಾ ಬಂತು ರೆಕ್ಕೆ ಪುಕ್ಕ...

ಅವು ಬಲಿತಾಗ ಆಗಿತ್ತು ಬರೀ ಕಾರ್ಗತ್ತಲು...

ಅವುಗಳ ಮುಂದೆ .. ಹಿಂದಲ್ಲವೇ ಬದುಕು...

ಕೆಲವೊಮ್ಮೆ ಆ ಕತ್ತಲ ಹಿಂದೆ ಬದುಕು... ಇನ್ನೊಮ್ಮೆ ಆ ಕತ್ತಲ ಮುಂದೆ...

Monday, November 17, 2008

ಪೊಸಡಿಗುಂಪೆಯೆಂಬ ಮಾಯೆ....



ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ..

ಪ್ರಕೃತಿಯ ಸೊಬಗು ಏನು ಆನಂದ...




ಈ ಸೊಬಗ ಸವಿದು ಮನದುಂಬಿ ಬಂದಾಗ

ಹೊಸ ಹುರುಪು... ಹೊಸ ಭಾವನೆ... ಅದರ ಹರಿವು...

Saturday, October 25, 2008

ಪಾಲಿಗೆ ಬಂದದ್ದು...




ಪೇಟೆಯ ಪ್ಲಾಸ್ಟಿಕ್ ನಮ್ಮ ಆಹಾರ...

ನಗರದ ಕೊಳಚೆ ನಮ್ಮ ಶುದ್ಧ ಜಲ....

ಕಾಪಾಡುವ ಜನರಾರು ನಮ್ಮ.....

Wednesday, October 22, 2008

ನೆರಳು - ಬೆಳಕಿನ ಆಟ..




ಬೆಂಕಿ ಬಿದ್ದಿದೆ ಕಾಡಿಗೆ ...!!

ಬೇಗ ಬನ್ನಿ.. ಓ.. ನನ್ನ ರಕ್ಷಕರೇ....!?

Tuesday, October 21, 2008

ಮಂಗಚೇಷ್ಟೆ....



ಮಂಗಚೇಷ್ಟೆ... ಇದು ಮಂಗಚೇಷ್ಟೆ..

ಬೈಕ್ ಮೇಲೆ ಸವಾರಿ ಮಾಡಿದರೆ ಹೇಗಿರುತ್ತೆ ...

ಒಮ್ಮೆ ಬೈಕ್ ನಲ್ಲಿ ಹೋಗಿ ಬರಲಾ...

ನೀವೂ ನಂಜೊತೆ ಬರ್ತೀರಾ ...

ಕೀಟಲೆ ಮಾಡಬೇಡಿ ಪ್ಲೀಸ್... ಅನ್ನುತ್ತಿದೆಯಂತೆ "ಆ" ಮಂಗ...

Friday, October 10, 2008

ಕಲ್ಲರಳಿ ..... ಹೂವಾಗಿ.....






ಕಲ್ಲು ಅರಳಿದಾಗ ಕಾಣುವ ಸೊಬಗು ....

ನೋಡಲು ಬಲು ಅಂದ...

ಕಲ್ಲುಗಳ ಕುಂಡವೇ ಹೂವಿಗೆ ಆಸರೆಯಾದಾಗ

ಅದು ಕಲ್ಲರಳಿ ಹೂವಾದಂತೆಯೇ...